2.
ಆಹಾರ ಭದ್ರತೆ ಎಂದರೆ ಏನು?ಆಹಾರ ಭದ್ರತೆ ಎಂದರೆ ಏನು? ದೇಶದ ಪ್ರಜೆಗೆ / ವ್ಯಕ್ತಿಗೆ ಸರ್ವಕಾಲಿಕವಾಗಿ ತನ್ನನ್ನು ಪೋಷಿಸಿಕೊಳ್ಳಲು ಅನುವಾಗುವ ಸುರಕ್ಷಿತ ಸ್ಥಿತಿ. ಇದು 3 ಅಂಶಗಳನ್ನೊಳಗೊಂಡಿದೆ. 1.ಪೂರೈಕೆ – ಉತ್ಪಾದನೆ ಅಥವಾ ಆಮದು. 2.ಲಭ್ಯತೆ – ಸ್ಥಳೀಯವಾಗಿ ದೊರೆಯುವ ವ್ಯವಸ್ಥೆ. 3.ಕೈಗೆಟಕುವ – ಬೆಲೆ
3.
ಆಹಾರ ಸುರಕ್ಷತೆ ಏಕೆ ಬೇಕು?ಆಹಾರ ಸುರಕ್ಷತೆ ಏಕೆ ಬೇಕು? ►ಉಳಿವಿಗಾಗಿ - ದೇಶದಲ್ಲಿ ಯಾವುದೇ ರೀತಿಯ ಪ್ರಾಕೃತಿಕ, ಸಾಮಾಜಿಕ ಅಥವಾ ಆರ್ಥಿಕ ಪರಿಸ್ಥಿತಿಯು ವಿಕೋಪಕ್ಕೆ ತಲುಪಿದಾಗ. ಉದಾ: ಸುನಾಮಿ, ಬರಗಾಲ, ಗಲಭೆ, ಆರ್ಥಿಕ ಕುಸಿತ. ►ನೆರವಿಗಾಗಿ - ದುರ್ಬಲ ವರ್ಗದವರ ಬದುಕಿಗೆ ಆಸರೆಯಾಗಲು / ಆಹಾರ ಭದ್ರತೆ ಒದಗಿಸಲು.
4.
ಉದಾಹರಣೆಗೆ, ಬರಪೀಡಿತ ಸನ್ನಿವೇಶಉದಾಹರಣೆಗೆ, ಬರಪೀಡಿತ ಸನ್ನಿವೇಶ ►ಒಮ್ಮಿಂದೊಮ್ಮೆಗೆ, ಆಹಾರ ಲಭ್ಯತೆ ಕ್ಷೀಣವಾಗುತ್ತದೆ. ►ಅಹಾರ-ವಸ್ತುಗಳ ಬೆಲೆ ಗಗನಕ್ಕೇರುತ್ತದೆ. ►ಮುಂದೆ, ಹಣವಿದ್ದರೂ ಆಹಾರ ದೊರೆಯದೇ ಇರಬಹುದು. ►ಸರಣಿ ಸಾವು ನೋವುಗಳು ಮತ್ತು ರೊಗಗ್ರಸ್ಥತೆ ಉಂಟಾಗುತ್ತದೆ. ►ಉಳಿವಿಗಾಗಿ, ಆಕ್ರಮಣಕಾರಿ ಗುಂಪುಗಳು ಮೂಡಿ, ಆಹಾರಕ್ಕಾಗಿ ಕೊಲೆ, ಆತ್ಮಹತ್ಯೆಗಳು ನಡೆಯಬಹುದು. ►ದೇಶದ ಆಂತರಿಕ ಭದ್ರತೆ ಕಡಿಮೆಯಾಗಿ, ಮುಂದೆ ಬಾಹ್ಯ ಭದ್ರತೆಯೂ ಕಳೆದುಹೋಗಬಹುದು. ►ಅಂತರ್ಯುದ್ಧಕ್ಕೆ (Civil War ಗೆ) ಕಾರಣವಾಗಬಹುದು.
5.
ಇದೇ ರೀತಿಯ ಘಟನೆಗಳಿಗೆ ಉದಾಹರಣೆ.ಇದೇ ರೀತಿಯ ಘಟನೆಗಳಿಗೆ ಉದಾಹರಣೆ. ►2011 ನೇ ವರ್ಷದಿಂದ 2015ರ ವರೆಗೆ ಲಿಬಿಯಾ ದೇಶದಲ್ಲಿ ಆದ ಆರ್ಥಿಕ ಕುಸಿತದಿಂದ ಅಲ್ಲಿನ ನಾಗರಿಕರ ಮೇಲೆ ಆದ ದುಷ್ಪರಿಣಾಮ.
6.
Slide6►ಜಗತ್ತಿಗೆ ಅತ್ಯಂತ ಹೆಚ್ಚು ವಿಶ್ವ ಸುಂದರಿಯರನ್ನು ನೀಡಿರುವ ತೈಲ ವಹಿವಾಟಿನ ರಾಷ್ಟ್ರವಾದ ಲಿಬಿಯಾ 2011ನೇ ಮೇ ತಿಂಗಳಲ್ಲಿ ಎಂದೂ ಕಂಡರಿಯದ ಆಹಾರ ಕೊರತೆಯನ್ನು ಎದುರಿಸಬೇಕಾಯ್ತು. ►ತೈಲ ಬೆಲೆ ಕುಸಿತದಿಂದಾಗಿ, ಹಣದ ಮೌಲ್ಯ ಕಳೆದುಕೊಂಡು, ಆಹಾರ ಆಮದು ಸರಬರಾಜು ನಿಂತೇ ಹೋಯಿತು. ►ಕಂತೆ ಕಂತೆ ಹಣವಿದ್ದರೂ, ಜನರಿಗೆ ಆಹಾರ ಸಿಗಲಿಲ್ಲ. ►ಆಹಾರ ದೋಚಿ ತಿನ್ನುತ್ತಿದ್ದ ಜನರು ಅಂಗಡಿ, ಮಾಲ್, ಗೋದಾಮುಗಳನ್ನು ದೋಚಿ, ಕಿತ್ತು ತಿಂದರೂ, ಕ್ಷಾಮದ ಬಿಸಿ ಆರಲಿಲ್ಲ. ►ಸರಕಾರ ಬಿದ್ದು ಹೊಗಿ, ಜನರನ್ನು ರಕ್ಷಿಸಬೇಕಿದ್ದ ಮಿಲಿಟರಿಯವರೇ ಜನರ ಮೇಲೆ ಗುಂಡುಗಳ ಮಳೆಗರೆಯಬೇಕಾಯ್ತು. ►ಹಲವು ಸಾವುನೋವುಗಳಾಗಿ ಅಮಾಯಕ ಜನ ಹೆಣಗಳಾಗಬೇಕಾಯ್ತು.
7.
ಆ ದೇಶ ಮಾಡಿದ ಪ್ರಮಾದವೇನು? [ಯಾಕೆ ಹೀಗಾಯ್ತು?]ಆ ದೇಶ ಮಾಡಿದ ಪ್ರಮಾದವೇನು? [ಯಾಕೆ ಹೀಗಾಯ್ತು?] ►ಕೇವಲ ವ್ಯವಹಾರ, ತಾಂತ್ರಿಕತೆ ಮತ್ತು ಸೌಂದರ್ಯಕ್ಕೆ ಮಾತ್ರ ಬೆಲೆ ನೀಡಿರುವುದು. ►ಕೃಷಿಯನ್ನು ಕಡೆಗಣಿಸಿರುವುದು. ►ಕೃಷಿಯನ್ನು ಮಾಡುವುದು ಸಾಮಾಜಿಕವಾಗಿ ಮಾನ್ಯತೆ ಕಳೆದುಕೊಂಡಿರುವುದು. ►ಶಿಕ್ಷಣ ಮತ್ತು ಸರಕಾರದ ಪ್ರಾಯೋಜಕತ್ವದಲ್ಲಿ ಕೇವಲ Fashion ಗೆ ಮಾತ್ರ ತರಬೇತಿ ನೀಡಿರುವುದು. ►ಸೂಕ್ತ ಪ್ರಮಾಣದಲ್ಲಿ ಆಹಾರ ಆಮದು ಮತ್ತು ದಾಸ್ತಾನು ಸಂಗ್ರಹವಿಲ್ಲದೆ ಹೋಗಿರುವುದು. ►ಪರ್ಯಾಯವಾಗಿ ಸರಕಾರವು ಪರಿಸ್ಥಿತಿಯನ್ನು ನಿಭಾಯಿಸಲು ಯಾವುದೇ ಪೂರ್ವ ಸಿದ್ಧತೆಯಿಲ್ಲದೇ ಹೋಗಿರುವುದು.
8.
Slide8►ಇತಿಹಾಸ ಕಾಲದಿಂದ ಹಲವು ರಾಜ್ಯಗಳ ಕೋಟೆಗಳಿಗೆ ಮುತ್ತಿಗೆ ಹಾಕಲ್ಪಟ್ಟಾಗ ಒಳಗಿದ್ದ ಜನರು ಮತ್ತು ಸೈನಿಕರು ಕೆಲ ಕಾಲದ ನಂತರ ಆಹಾರವಿಲ್ಲದೆ, ತಮ್ಮ ಬಲ ಉಡುಗಿ ಹೋಗಿ, ವಿಧಿಯಿಲ್ಲದೇ, ಶರಣಾದ ನಿದರ್ಶನಗಳಿವೆ. ►ಸ್ವಾತಂತ್ರ್ಯ ಪೂರ್ವ ಭಾರತದ ಬಂಗಾಳದಲ್ಲಿ 1943 ರಲ್ಲಿ ಉಂಟಾದ ಆಹಾರ ಕ್ಷಾಮದಲ್ಲಿ 30 ಲಕ್ಷ ಜನರು ಸಾವಿಗೀಡಾಗಿರುವುದನ್ನು ಐತಿಹಾಸಿಕ ದಾಖಲೆಗಳಲ್ಲಿ ಕಾಣಬಹುದು
9.
ಭಾರತದ ಆಹಾರೋತ್ಪಾದನೆಯಲ್ಲಿ ಮತ್ತು ಸುರಕ್ಷತೆಯಲ್ಲಿ ಇಂದಿನ ವಾಸ್ತವಿಕ ಸ್ಥಿತಿ. 1ಭಾರತದ ಆಹಾರೋತ್ಪಾದನೆಯಲ್ಲಿ ಮತ್ತು ಸುರಕ್ಷತೆಯಲ್ಲಿ ಇಂದಿನ ವಾಸ್ತವಿಕ ಸ್ಥಿತಿ. 1 ►ಯಾರು ಸುರಕ್ಷಿತರು? : ►ಸ್ವಂತ ಜಮೀನಿನಲ್ಲಿ ಧಾನ್ಯ ಮತ್ತು ಅಗತ್ಯ ಆಹಾರೊತ್ಪನ್ನಗಳನ್ನು ಬೆಳೆಯುವವರು. ►ಸಾಲದ ಹೊರೆಯಿಲ್ಲದ ರೈತರು ►ಅಹಾರ ದಾಸ್ತಾನು ಮತ್ತು ವಹಿವಾಟು ನಿರ್ವಹಿಸುವ ಮದ್ಯವರ್ತಿಗಳು ►ಪ್ರಸ್ತುತ ಸ್ಥಿತಿಗತಿಲ್ಲಿ, ಉತ್ತಮ ಆದಾಯ ಪಡೆಯುತ್ತಿರುವವರು. ►ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರಾಗಿರುವವರು.
10.
ಭಾರತದ ಆಹಾರೋತ್ಪಾದನೆಯಲ್ಲಿ ಮತ್ತು ಸುರಕ್ಷತೆಯಲ್ಲಿ ಇಂದಿನ ವಾಸ್ತವಿಕ ಸ್ಥಿತಿ. 2ಭಾರತದ ಆಹಾರೋತ್ಪಾದನೆಯಲ್ಲಿ ಮತ್ತು ಸುರಕ್ಷತೆಯಲ್ಲಿ ಇಂದಿನ ವಾಸ್ತವಿಕ ಸ್ಥಿತಿ. 2 ►ಯಾರು ಅಸುರಕ್ಷಿತರು? : ►ಜಮೀನು ರಹಿತರು ಮತ್ತು ಸಣ್ಣ ಸ್ಥಳದಲ್ಲಿ ಮನೆಮಾಡಿಕೊಂಡವರು ►ಸಣ್ಣ ಸ್ವಾವಲಂಬಿ ಉದ್ಯೋಗಿಗಳು ►ತೀರಾ ಕಡಿಮೆ ಸಂಬಳಕ್ಕೆ ದುಡಿಯುವವರು ►ನಗರವಾಸಿ ಬಿಕ್ಷುಕರು ಮತ್ತು ವಲಸಿಗರು. ►ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರು ►ವಿಶೇಷ ಸಂದರ್ಭಗಳಲ್ಲಿರುವ ವಲಸಿಗರು, ನಿರಾಶ್ರಿತರು ಮತ್ತು ಪ್ರಕೃತಿ ವಿಕೋಪಕ್ಕೆ ಬಲಿಯಾದ ಪ್ರದೇಶದವರು.
11.
Slide11►ಈಗಾಗಲೇ ಅಸ್ತಿತ್ವಕ್ಕೆ ಬಂದಿರುವ ಹಸಿರುಕ್ರಾಂತಿಯ ಫಲವಾಗಿ ಹರಿಯಾಣ, ಪಂಜಾಬ್ ಗಳಲ್ಲಿ ಗೋಧಿ ಉತ್ಪಾದನಾ ಸಾಮರ್ಥ್ಯವು 7.23 ಮಿಲಿಯನ್ ಟನ್ ಗಳಿಂದ, 30.33 ಟನ್ ಗಳಿಗೇರಿರುವುದು. ►ತಮಿಳ್ನಾಡು, ಆಂದ್ರಪ್ರದೇಶ ಗಳಲ್ಲಿಯೂ ಭತ್ತದ ಇಳುವರಿ ಪ್ರಮಾಣ ಗಣನೀಯವಾಗಿ ಹೆಚ್ಚಿದೆ. ►Food Corporation of India [FCI] ಮುಖಾಂತರ ಅಹಾರ ದಾಸ್ತಾನು ಮತ್ತು ಸರಬರಾಜು ಪ್ರಕ್ರಿಯೆ ನಡೆಯುತ್ತಿದೆ. ►ಬೆಂಬಲ ಬೆಲೆಯಲ್ಲಿ ಧಾನ್ಯಗಳನ್ನು ರೈತರಿಂದ ಸಂಗ್ರಹಿಸಿ, ರಿಯಾಯಿತಿ ದರದಲ್ಲಿ ಅವಶ್ಯಕ ಪ್ರದೇಶಗಳಿಗೆ ಸಹಕಾರಿ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ವಿವರದಂತೆ ವಿತರಿಸಲಾಗುತ್ತಿದೆ. ಭಾರತದ ಆಹಾರೋತ್ಪಾದನೆಯಲ್ಲಿ ಮತ್ತು ಸುರಕ್ಷತೆಯಲ್ಲಿ ಇಂದಿನ ವಾಸ್ತವಿಕ ಸ್ಥಿತಿ. 3
12.
Slide12►ಬಡತನ ನಿರ್ಮೂಲನಾ ಯೋಜನೆಗಳು, ಮಧ್ಯಾಹ್ನದ ಊಟ ವ್ಯವಸ್ಥೆಗಳು ಸಹ FCI ಆಹಾರ ದಾಸ್ತಾನು ಲಭ್ಯತೆಯನ್ನು ಅವಲಂಬಿಸಿವೆ. ►ಅಂತ್ಯೋದಯ ಯೋಜನೆ, ಅನ್ನಪೂರ್ಣ ಸ್ಕೀಂ ನಂತಹ ಆಹಾರ ವಿತರಣಾ ವ್ಯವಸ್ಥೆಗಳು ಸಹ ಆಹಾರ ಭದ್ರತೆಯನ್ನು ಒದಗಿಸುವ ಸರಕಾರದ ಯೋಜನೆಗಳಾಗಿವೆ. ಭಾರತದ ಆಹಾರೋತ್ಪಾದನೆಯಲ್ಲಿ ಮತ್ತು ಸುರಕ್ಷತೆಯಲ್ಲಿ ಇಂದಿನ ವಾಸ್ತವಿಕ ಸ್ಥಿತಿ. 4
13.
ಸಾಧ್ಯತೆಗಳುಸಾಧ್ಯತೆಗಳು ►ಅಭಿವೃದ್ಧಿಪಡಿಸಿದ ಪೈರು ತಳಿ ಬೀಜಗಳ ಪೂರೈಕೆ ಮತ್ತು ಬಳಕೆ. ►ಇದರಿಂದಾಗಿ ಧಾನ್ಯ ಇಳುವರಿಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತದೆ. ►ರೋಗ ನಿರೋಧಕತೆ ಹೆಚ್ಚಿರುವ ತಳಿಗಳ ಬಳಕೆಯಿಂದ ಮದ್ಯಂತರ ನಿರ್ವಹಣೆಯ ಶ್ರಮ ಕಡಿಮೆ. ►ಕೃಷಿ ಇಲಾಖೆಯ ಮೂಲಕ ಬೀಜಗಳ ಲಭ್ಯತೆಯು ಖಾಸಗಿ ಕಂಪನಿಗಳಿಗಿಂತ ಹೆಚ್ಚು ಭರವಸೆದಾಯಕ. ಇಂದಿಗೂ ಹಲವು ಜನ ರೈತರು ತಮ್ಮದೇ ಬೀಜ ಸಂಗ್ರಹವನ್ನು ಹೊಂದಿರುವುದು ಉತ್ತಮ. ಆದರೆ ಹೆಚ್ಚು ಇಳುವರಿಯಿಲ್ಲದ ಹಳೆಯ ತಲೆಮಾರುಗಳ ಬೀಜಗಳನ್ನೇ ಪುನ: ಬಳಕೆ ಮಾಡುತ್ತಿರುವುದನ್ನು ನಿಲ್ಲಿಸಿ ಸುಧಾರಿತ ತಳಿಗಳನ್ನು ಬಳಸುವ ಮೂಲಕ ಸಮಗ್ರ ಇಳುವರಿಯನ್ನು ಹೆಚ್ಚಿಸುವ ಸಾಧ್ಯತೆಗಳನ್ನು ನಾವು ಕಾಣಬಹುದು.
14.
ಸಾಧ್ಯತೆಗಳುಸಾಧ್ಯತೆಗಳು ►ಆಧುನಿಕ ಆಹಾರ ಸಂಸ್ಕರಣಾ ಮತ್ತು ಸಂಗ್ರಹಣಾ ಘಟಕಗಳು. ►FCI ನಿಂದ ಸಂಗ್ರಹಿಸಲ್ಪಡುವ ಆಹಾರ ದಾಸ್ತಾನು ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ, ಸಂಗ್ರಹಣಾ ಮತ್ತು ನಿರ್ವಹಣಾ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳುವುದು. ►ಅತ್ಯಾಧುನಿಕ ಸಂಸ್ಕರಣಾ ಘಟಕಗಳಲ್ಲಿ, ಪೈರುಗಳಿಂದ ಧಾನ್ಯಗಳನ್ನು ನೇರವಾಗಿ ಪಡೆಯಬಹುದಾಗಿದ್ದು, ಆಹಾರ ವ್ಯರ್ಥವಾಗಿ ಪೋಲಾಗುವುದನ್ನು ಗಣನೀಯವಾಗಿ ಕಡಿಮೆ ಮಾಡುತ್ತವೆ. ►ಆಧುನಿಕ ಆಹಾರ ಸಂಸ್ಕರಣೆಯು ಉದ್ದೇಶರಹಿತ ಕಲಬೆರಕೆ (ಆಕಸ್ಮಿಕ ಕಲಬೆರಕೆ) ಯನ್ನು ಇಲ್ಲವಾಗಿಸುತ್ತದೆ.
15.
ಸಾಧ್ಯತೆಗಳುಸಾಧ್ಯತೆಗಳು ►ಸುಧಾರಿತ ಕೃಷಿ ಉಪಕರಣಗಳು. ►ಕೃಷಿಯನ್ನು ತ್ರಾಸದಾಯಕ ಕಾರ್ಯ ಎಂದು ನಾವು ಹಿಂಜರಿಯಬೇಕಾಗಿಲ್ಲ. ►ಉಳುಮೆಗೆ ಟ್ರಾಕ್ಟರ್/ಟಿಲ್ಲರ್ ಗಳ ಲಭ್ಯತೆಯಿದೆ. ►ಕಳೆ ಕೀಳುವ ಯಂತ್ರಗಳಿವೆ. ►ನೀರಾವರಿ ಸಾಧನಗಳಿವೆ ►ಮಣ್ಣು ಗೊಬ್ಬರ ಮತ್ತು ಕೀಟನಾಶಕ ಬಳಕೆಗೆ ಸಾಧನಗಳಿವೆ ►ಕಟಾವು ಯಂತ್ರಗಳಿವೆ
16.
ಸಾಧ್ಯತೆಗಳುಸಾಧ್ಯತೆಗಳು ►ಕೃಷಿ ಸಾಲ, ಸಬ್ಸಿಡಿ ವಿಮೆ ಮತ್ತು ಪರಿಹಾರ ಸೌಲಭ್ಯಗಳು ►ಬಡ್ಡಿರಹಿತ ಇಲ್ಲವೇ, ಕಡಿಮೆ ಬಡ್ಡಿಯ ಸಾಲ ಸೌಲಭ್ಯ ದೊರೆಯುವ ಮೂಲಕ ಹೂಡಿಕೆಗೆ ಅನುಕೂಲ. ►ದುಬಾರಿಯಾದ ಕೃಷಿ ಪರಿಕರಗಳನ್ನು ಸಬ್ಸಿಡಿಯ ಮೂಲಕ ಕಡಿಮೆ ದರದಲ್ಲಿ ಪಡೆಯಲು ಅವಕಾಶಗಳಿವೆ. ►ಸಾಲ ಮನ್ನಾ ಮತ್ತು ಬಡ್ಡಿ ಮನ್ನಾ ಮಾಡುವ ರೈತ ಸ್ನೇಹಿ ಅನುಷ್ಟಾನದಿಂದಾಗಿ ಸಾಲದ ಹೊರೆ ಕಡಿಮೆ ಮಾಡಿ, ಕೃಷಿಯಲ್ಲಿ ಹೆಚ್ಚಿನ ಪ್ರಮಾಣದ ತೊಡಗಿಸಿಕೊಳ್ಳುವಿಕೆಯನ್ನು ಅಪೇಕ್ಷಿಸಬಹುದು. ►ವಿಕೋಪ ಮತ್ತು ಆಕಸ್ಮಿಕಗಳಿಂದ ಬೆಳೆ ನಷ್ಟ ಹೊಂದಿದವರಿಗೆ ಬೆಳೆ ವಿಮೆಯನ್ನು ಒದಗಿಸುವ ಮೂಲಕ ರೈತರ ಮೇಲಾಗುವ ಆರ್ಥಿಕ ಹೊರೆಯನ್ನು ಪರಿಣಾಮಕಾರಿಯಾಗಿ ತಡೆಯಬಹುದಾಗಿದೆ.
17.
ಸಾಧ್ಯತೆಗಳುಸಾಧ್ಯತೆಗಳು ►ಮಾರುಕಟ್ಟೆ ಮತ್ತು ಬೆಂಬಲ ಬೆಲೆ. ►ಮದ್ಯವರ್ತಿಗಳಿಲ್ಲದ ನೇರ ಮಾರುಕಟ್ಟೆಯ ಅವಕಾಶ. ►ಧಾನ್ಯಗಳನ್ನು ಸಂಸ್ಕರಿಸಿ, ನೇರವಾಗಿ ಸರಕಾರವೇ ಖರೀದಿಸುವ ಸಾಧ್ಯತೆಯನ್ನು ಪರಿಗಣಿಸಬೇಕು. ►ಯಾವುದೇ ಕೃಷಿಯಲ್ಲಿ ಸಾರ್ವರ್ತ್ರಿಕವಾಗಿ ಮಿತಿಮೀರಿದ ಬೆಳೆ ಉತ್ಪನ್ನ ಲಭಿಸಿದಾಗ, ಸಣ್ಣ ಹಿಡುವಳಿದಾರರಿಗೆ ಆಗಬಹುದಾದ ನಷ್ಟವನ್ನು ಅಂದಾಜುಮಾಡಿ, ಬೆಂಬಲ ಬೆಲೆ, ಪರಿಹಾರಗಳನ್ನು ದೊರೆಯುವಂತೆ ಮಾಡಿದರೆ ಸಹ ರೈತರ ಉಳಿವನ್ನು ಮತ್ತು ಕೃಷಿಯ ಏಳಿಗೆಯನ್ನು ಕಾಣಬಹುದು.
18.
ಸಾಧ್ಯತೆಗಳುಸಾಧ್ಯತೆಗಳು ►ಕೃಷಿ ಇಲಾಖೆಯ ಮುಖಾಂತರ ತಾಂತ್ರಿಕ ಸಹಾಯ, ವೈಜ್ಞಾನಿಕ ಪದ್ಧತಿಗಳಿಗೆ ಸಹಾಯ. ►ಮಣ್ಣು ಪರೀಕ್ಷೆಯ ಮೂಲಕ ಸ್ಥಳದಲ್ಲಿ ಕೃಷಿಯನ್ನು ಮಾಡಲು ಇರುವ ಸೂಕ್ತತೆ ಮತ್ತು ಸಾಧ್ಯತೆಗಳನ್ನು ಮನಗಾಣಬಹುದು. ►ಯಾವ ಬೆಳೆಗೆ ಎಷ್ಟು ಪ್ರಮಾಣದಲ್ಲಿ, ಯಾವ ಗೊಬ್ಬರವನ್ನು , ಯಾವ ಕಾಲಾನುಕ್ರಮದಲ್ಲಿ ಮತ್ತು ಯಾವ ವಿಧಾನದಲ್ಲಿ ಪೂರೈಸಬೇಕು ಎಂಬ ಮಾಹಿತಿ ಆನ್ಲೈನ್ ಸಾಫ್ಟ್ವೇರ್ಗಳಲ್ಲಿ ನೇರವಾಗಿ ಮೊಬೈಲ್ ಮೂಲಕ ಲಭ್ಯಗೊಳಿಸುವುದೂ ಒಂದು ಸಾಧ್ಯತೆಯಾಗಿದೆ. ►ರೈತರ ಸಹಾಯವಾಣಿಯ ಮೂಲಕ ಸಲಹೆ ಸೂಚನೆಗಳನ್ನು ಪಡೆಯುವುದನ್ನು ಪರಿಣಾಮಕಾರಿಗೊಳಿಸಿ, ಇಂದಿನ ತಾಂತ್ರಿಕ ಜ್ಞಾನವನ್ನು ಸದುಪಯೋಗ ಮಾಡುವುದೂ ಒಂದು ಸಾಧ್ಯತೆ.
19.
ಸಾಧ್ಯತೆಗಳುಸಾಧ್ಯತೆಗಳು ►ಕೃಷಿ ಇಲಾಖೆಯ ಮುಖಾಂತರ ಪ್ರಾತ್ಯಕ್ಷಿಕೆಗಳು, ತರಬೇತಿಗಳು. ►ರೈತ ಸ್ನೇಹಿ ಕಾರ್ಯಕ್ರಮಗಳ ಮೂಲಕ ಮಾದ್ಯಮಗಳಲ್ಲಿ ಮಾಹಿತಿ ಮತ್ತು ಪ್ರೇರಣೆ ಒದಗಿಸುವುದು. ಉದಾ : ಗೆ ಕೃಷಿರಂಗ, ಕೃಷಿ ದರ್ಶನ ಕಾರ್ಯಕ್ರಮಗಳು ►ಶಿಕ್ಷಣ ಕ್ಷೇತ್ರದಲ್ಲಿ ಪಠ್ಯ ಕ್ರಮದ ಮೂಲಕ ಕೇವಲ ಪದ್ಧತಿ ಮತ್ತು ಹಂತಗಳ ಬಗ್ಗೆ ಅಲ್ಲದೆ, ಕೃಷಿಯನ್ನು ಒಂದು ಜೀವನೋಪಾಯವಾಗಿ ತೆಗೆದುಕೊಳ್ಳಬಹುದು ಎಂಬ ಪ್ರೇರಣೆ ನೀಡುವ ಶಿಕ್ಷಣವನ್ನು ನೀಡುವ ದಿಟ್ಟ ಕ್ರಮಗಳು ಇಂದಿನ ಮತ್ತು ಮುಂದಿನ ಜನಾಂಗಗಳು ಕೃಷಿಯನ್ನು ತ್ಯಜಿಸದಂತೆ ಕಾಪಾಡಬಲ್ಲವು.
20.
ಸಾಧ್ಯತೆಗಳುಸಾಧ್ಯತೆಗಳು ►ನಗರದಲ್ಲಿ ಕೃಷಿ, - ತಾರಸಿ ಕೃಷಿ, ಮಿನಿಯೇಚರ್ ಕೃಷಿ. ►ಸ್ವಂತ ತಾರಸಿ ಮಾಡು ಹೊಂದಿದವರಿಗೆ, ಆರಂಭಿಸಲು ಪ್ರೇರಣೆ. ಪ್ರಚಾರ ಮತ್ತು ಹವ್ಯಾಸವಾಗಿ ಬೆಳೆಸಲು ಕರೆ. ►ಮಾಲಿನ್ಯ ಕಡಿಮೆ ಮಾಡುವುದಲ್ಲದೆ, ಮಾರುಕಟ್ಟೆಯ ಅವಲಂಬನೆಯನ್ನು ತಕ್ಕ ಮಟ್ಟಿಗೆ ಸರಳಗೊಳಿಸುತ್ತದೆ. ಮನೋರಂಜನೆ, ಮಾನಸಿಕ ನೆಮ್ಮದಿ [ಹಸುರುಮಯತೆಯಿಂದ] ಮತ್ತು ಹವ್ಯಾಸದೊಂದಿಗೆ, ಸಣ್ಣ ಆದಾಯವನ್ನೂ ನೀಡಿ ಪ್ರೇರೇಪಿಸುತ್ತದೆ.
21.
ಸಾಧ್ಯತೆಗಳುಸಾಧ್ಯತೆಗಳು ►ಜೈವಿಕ ತಂತ್ರಜ್ಞಾನದ ಅನ್ವಯ ಮತ್ತು ಅನ್ವೇಷಣೆಗಳು. ►ಅನುವಂಶೀಯವಾಗಿ ಪೊಷಕಾಂಶಗಳನ್ನು ಧಾನ್ಯಬೆಳೆಯಲ್ಲಿಯೇ ಲಭ್ಯವಾಗುವಂತೆ ಮಾಡುವ ಮೂಲಕ, ಕಡಿಮೆ ಆಹಾರ ಸೇವನೆಯಲ್ಲೂ ಎಲ್ಲಾ ಅಗತ್ಯ ಪೊಷಕಾಂಶಗಳು ದೊರೆಯುವಂತೆ ಮಾಡುವುದು ತುರ್ತು ಸಂದರ್ಭಗಳಲ್ಲಿ ಲಾಭದಾಯಕ ಹೆಜ್ಜೆಯಾಗಿದೆ. ►ಅಧಿಕ ಪ್ರಮಾಣದ ದುಬಾರಿ ವಿಧಾನಗಳಿಗಿಂತ, ಜೈವಿಕ ತಂತ್ರಜ್ಞಾನದ ಮೂಲಕ ಸರಳವಾಗಿ, ಅಹಾರ ವಸ್ತುಗಳ ಬಾಳಿಕೆ, ಬೆಳೆಯುವ ಅವಧಿ, ರೋಗ ನಿರೋಧಕ ಸಾಮರ್ಥ್ಯಗಳನ್ನು ಹೆಚ್ಚಿಸಬಹುದು, / ಬದಲಾಯಿಸಬಹುದು. ►ಈ ಮೂಲಕ ಇಳುವರಿಯ ಪ್ರಮಾಣದಲ್ಲಿ ಮಾತ್ರವಲ್ಲ, ಗುಣಮಟ್ಟದಲ್ಲಿಯೂ ಹೆಚ್ಚಳವಾಗಬೇಕಾದ ಸಂಶೋಧನೆಗಳು ಇನ್ನೂ ಮುಂದುವರಿಯಬೇಕಾಗಿವೆ.
22.
?? ಸವಾಲುಗಳು ???? ಸವಾಲುಗಳು ?? ►ಪ್ರಸ್ತುತ ಭಾರತದಲ್ಲಿ ಬೆಳೆಯುತ್ತಿರುವ ಹೆಕ್ಟೇರುವಾರು ಸರಾಸರಿಯನ್ನು ಪರಿಗಣಿಸಿದರೆ, ಅದು 1935 ಕೆ. ಜಿ / ಹೆಕ್ಟೇರ್ ಇದೆ. ►ಆದರೆ, ಚೀನಾ 4329 ಕೆ. ಜಿ / ಹೆಕ್ಟೇರ್ ಬೆಳೆಯುತ್ತದೆ ►ಅಮೇರಿಕಾ, ಜನಸಂಖ್ಯೆ ಕಡಿಮೆಯಿದ್ದರೂ, 4040 ಕೆ. ಜಿ / ಹೆಕ್ಟೇರ್ ಬೆಳೆಯುತ್ತದೆ. ►ಇವುಗಳ ಮುಂದೆ ಕೃಷಿ ಪ್ರಧಾನವಾದ ಭಾರತದ ಹೆಕ್ಟೇರುವಾರು ಧಾನ್ಯ ಬೆಳೆಯ ಪ್ರಮಾಣ ಬಹಳ ಕಡಿಮೆ.
23.
ಸವಾಲುಗಳುಸವಾಲುಗಳು ►ವೈಜ್ಞಾನಿಕ / ತಾಂತ್ರಿಕ (ಸಂಬಂಧಿಸಿದ) ಜ್ಞಾನದ ಮತ್ತು ತರಬೇತಿಯ ಕೊರತೆ. ►ತರಬೇತಿಯನ್ನು ಪಡೆದುಕೊಳ್ಳಬೇಕಾದ ಅಗತ್ಯತೆಯನ್ನು ಮನಗಂಡಿಲ್ಲದೇ ಇರುವ ಕಾರಣ ಹಲವು ರೈತರು ತಮ್ಮದೇ ವಿಧಾನದಲ್ಲಿ ಕೃಷಿ ಪದ್ಧತಿಯನ್ನು ಅನುಸರಿಸುತ್ತಿರುವುದು ಇಳುವರಿಯ ಕೊರತೆಗೆ ಕಾರಣ. ►ತರಬೇತಿ ಪಡೆದ ನಂತರ ಅದರ ಅನುಷ್ಟಾನದಲ್ಲಿ ಇರುವ ತೊಡಕುಗಳು. ಉದಾ: ಗೆ, ಅನುಭವ ಇಲ್ಲದೇ ಮಾಡಿದ ಬದಲಾವಣೆಗಳಿಂದ ಅಚಾತುರ್ಯಗಳಾಗಿ ನಷ್ಟವಾಗುವುದು ಅಥವಾ ಹಾಗೆ ಆಗಬಹುದೆಂಬ ಆತಂಕ. ►ತರಬೇತಿ ನೀಡುವ ನುರಿತವರ ಕೊರತೆ. ಕೃಷಿ ಇಲಾಖೆಯಲ್ಲಿ ಅಧ್ಯಯನಕ್ಕೆ ಸೇರುವವರ ಪ್ರಮಾಣ ಕಡಿಮೆ. ಐಟಿ, ಎಂಜಿನಿಯರಿಂಗ್ ಆಯ್ಕೆ ಮಾಡುವವರು ಹೆಚ್ಚು.
24.
ಸವಾಲುಗಳುಸಾಧ್ಯತೆಗಳ ಅನುಷ್ಟಾನದಲ್ಲಿ ಇರಬಹುದಾದ ತೊಡಕು ಅಥವಾ ವಿಫಲತೆಯೇ ಈ ಸವಾಲುಗಳುಸವಾಲುಗಳು ಸಾಧ್ಯತೆಗಳ ಅನುಷ್ಟಾನದಲ್ಲಿ ಇರಬಹುದಾದ ತೊಡಕು ಅಥವಾ ವಿಫಲತೆಯೇ ಈ ಸವಾಲುಗಳು ►ಜಾಗತೀಕರಣದ ಮತ್ತು ವ್ಯವಹಾರಿಕ ಅಭಿವೃದ್ಧಿಶೀಲತೆಯ ಓಟದ ನಡುವೆ ಜೀವನ ಸುರಕ್ಷತೆಯ ಸವಾಲು. ►ನಗರೀಕರಣ ►ಜನಸಂಖ್ಯೆಯೊಂದಿಗೆ ಬೆಳೆಯುತ್ತಿರುವ ನಗರಗಳು, ಕೈಗಾರಿಕೆಗಳು, ಕಾಂಕ್ರೀಟ್ ಕಾಡುಗಳು. ►ಕೃಷಿ ಭೂಮಿಯ ಉದ್ಯಮೀಕರಣ. ಸೈಟುಗಳು. ►ಮೆಟ್ರೋ ನಿರ್ಮಾಣ, ಉದ್ಯಮಗಳಿಗೆ, ಕೈಗಾರಿಕೆಗಳಿಗೆ ಕೃಷಿ ಭೂಮಿಯ ಸ್ವಾಧೀನಪಡಿಸಿಕೊಳ್ಳುವಿಕೆ.
25.
ಸವಾಲುಗಳುಸವಾಲುಗಳು ►ಉದ್ಯೋಗ ಕ್ಷೇತ್ರ ►ನಗರದ ಉದ್ಯೋಗಾವಕಾಶಕ್ಕೆ ಪೈಪೋಟಿ ಮಾಡುತ್ತಿರುವ ಕಾಲದಲ್ಲಿ ಯುವ ಜನತೆ ಕೃಷಿಯನ್ನು ಸಾರಾಸಗಟವಾಗಿ ತಿರಸ್ಕರಿಸಿರುವಂತೆ ಕಂಡುಬರುತ್ತಿದೆ. ►ಕೃಷಿಯಲ್ಲಿ ನಷ್ಟದ ಅಪಾಯ (risk) ಹೆಚ್ಚು, ಬೆಲೆಯ ಬಗ್ಗೆ ಗ್ಯಾರಂಟಿ ಇಲ್ಲ ಎಂಬ ನೇರ ಅಭಿಪ್ರಾಯ. ಬೆಳೆ ನಾಶವಾದರೆ, ಪರಿಹಾರ ಕೈಸೇರಬಹುದೇ? ಇಲ್ಲವೇ ಎಂಬ ಸಂಶಯ, ಆತಂಕ. ►ಕಚೇರಿ ಕೆಲಸಕ್ಕೆಂದೇ ಇದ್ದಂತೆ ಕಾಣುವ ಶಿಕ್ಷಣ ಕ್ರಮದಲ್ಲಿ ಪದವಿಗಳನ್ನು ಪಡೆದ ನಂತರ ಕೃಷಿ ಮಾಡಿದರೆ ಜನರ ಟೀಕೆ ಸಿದ್ಧವಾಗಿರುತ್ತದೆ ಎಂಬ ಭಯ ►ಜೀವನ ಸಂಗಾತಿ ಆಯ್ಕೆ ಮತ್ತು ಸಂಪಾದನೆಯನ್ನು ಸಾಮಾಜಿಕವಾಗಿ ಗಂಭೀರ ಎಂದು ಪರಿಗಣಿಸುವ ಯುವಜನತೆಗೆ ಇದೊಂದು ಸವಾಲು ►ದುಡಿಯುವ ಹೊಲವಿರುವ ಮನೆಯನ್ನು ಸೇರುವುದಕ್ಕಿಂತ / ಹೊಂದುವುದಕ್ಕಿಂತ ನಗರಕ್ಕೆ ಹತ್ತಿರವಿರುವ ಐಷಾರಾಮಿ ಮನೆಯನ್ನು ಬಯಸುವವರೇ ಹೆಚ್ಚು.
26.
ಸವಾಲುಗಳುಸವಾಲುಗಳು ►ಕೃಷಿ ಆಸ್ತಿ ಮತ್ತು ಜಮೀನು ಮೌಲ್ಯಕ್ಕೂ ವಾಣಿಜ್ಯ ಉದ್ದೇಶದ ಜಮೀನಿಗೂ ಬೆಲೆಯಲ್ಲಿ ವ್ಯತ್ಯಾಸ. ►ಸಾಮಾನ್ಯವಾಗಿ ಅರ್ಥಿಕ ಭದ್ರತೆಯ ದೃಷ್ಟಿಕೋನದಲ್ಲಿ, ಜಮೀನನ್ನು ಮ್ಯುಟೇಶನ್ / ಕನ್ವರ್ಶನ್ ಮಾಡಿದಲ್ಲಿ, ಮಾರಾಟಕ್ಕೆ ಅನುಕೂಲಕರ ಎಂಬ ಲೆಕ್ಕಾಚಾರವು ಕೃಷಿ ಭೂಮಿಯನ್ನೇ ತ್ಯಜಿಸಲಾಗಿ, ವ್ಯವಹಾರ ಅಥವಾ ಇತರ ಉದ್ಯೋಗದಿಂದ ಮಾತ್ರ ಹೆಚ್ಚು ಲಾಭ ಗಳಿಸಬಹುದೆಂಬ ಹುಸಿ ಪ್ರಚೋದನೆ ನೀಡುತ್ತದೆ. ►ಹಳ್ಳಿಗಳಲ್ಲೂ ವಸತಿ ಸಮುಚ್ಚಯಗಳ ವ್ಯಾಪಾರವು ತೀವ್ರಗತಿಯನ್ನು ಪಡೆಯುತ್ತಿರುವುದು ಆತಂಕಕಾರಿ ಅಂಶವಾಗಿದೆ.
27.
ಸವಾಲುಗಳುಸವಾಲುಗಳು ►ಕೌಟುಂಬಿಕ / ಸಾಮಾಜಿಕ / ಶೈಕ್ಷಣಿಕ ಆದ್ಯತೆಗಳು ►ಶ್ರಮ ಜೀವನಕ್ಕೆ ಇರುವ ಗೌರವ ಕಡಿಮೆಯಾಗಿ, ಸುಲಭವಾಗಿ ಮತ್ತು ಆರಾಮವಾಗಿ ಎಲ್ಲವೂ ಲಭ್ಯವಾಗಬೇಕೆಂದು ಬಯಸುವ ಮನೋಧೊರಣೆ. ►ಶ್ರಮಕ್ಕೆ ತಕ್ಕ ಪ್ರತಿಫಲವಿಲ್ಲ ಎಂಬ ತುಲನಾತ್ಮಕ ಲೆಕ್ಕಾಚಾರ. ►ಚಿಕ್ಕ ಕುಟುಂಬಗಳಾಗಿರುವ ಕಾರಣ, ದುಡಿಯುವವರ ಸಂಖ್ಯೆ ಕಡಿಮೆ. ►ಕೆಲಸಗಾರರನ್ನೇ ಅವಲಂಭಿಸಬೇಕಾದ ಅನಿವಾರ್ಯತೆ. ಮತ್ತು ಕೆಲಸಗಾರರ ಕೊರತೆ. ►ನಗರದ ಉದ್ಯೋಗದಲ್ಲಿದ್ದರೆ ಊರಿನಲ್ಲಿ ಹೆಚ್ಚು ಮರ್ಯಾದೆ. ►ಶಿಕ್ಷಣದ ಫಲವಾಗಿ ಕಛೇರಿ ಉದ್ಯೋಗವೇ [White Collar Job] ದೊರೆಯಬೇಕೆಂಬ ಮಾರ್ಗದರ್ಶಿಗಳ ಪರೋಕ್ಷ ಪ್ರೇರಣೆ.
28.
ಸವಾಲುಗಳುಸವಾಲುಗಳು ►FCI ನಂತಹ ಸಂಸ್ಥೆಗಳಿಂದ ಸಂಗ್ರಹಿಸಲ್ಪಟ್ಟ ಆಹಾರ ಧಾನ್ಯಗಳ ಸುರಕ್ಷತೆ ಮತ್ತು ಬಾಳಿಕೆ ►ಗೋದಾಮುಗಳಲ್ಲಿ ಆಹಾರ ಪೋಲಾಗುವುದು ಮತ್ತು ನಷ್ಟವಾಗುವುದು. ►ಸಾಗಾಣಿಕೆ ಮತ್ತು ದಾಸ್ತಾನುಗೊಳಿಸುವಿಕೆಯಲ್ಲಿ ನಿಭಾವಣೆಯಲ್ಲಿನ ದೋಷಗಳು. ►ಧಾನ್ಯ ಸಂಗ್ರಹದ ಅವೈಜ್ಞಾನಿಕ ನಿರ್ವಹಣೆ ►ಸಾಮರ್ಥ್ಯ ಮೀರಿದ ಸಂಗ್ರಹಣಾ ಪರಿಮಾಣ. ►ಅವಧಿ ಮೀರಿದ ಆಹಾರವೂ ವಿಲೇವಾರಿ – ಸರಬರಾಜು ಆಗದೇ ಉಳಿಯುವುದು. ►ಅವೈಜ್ಞಾನಿಕವಾಗಿ ನಿರ್ಮಿಸಿದ ದಾಸ್ತಾನು ಕೊಠಡಿಗಳು.
29.
ಸವಾಲುಗಳುಸವಾಲುಗಳು ►ಅವ್ಯವಹಾರ, ಕಲಬೆರಕೆ ಮತ್ತು ಅಕ್ರಮ ದಾಸ್ತಾನುಗಳು ►ವಿತರಣೆಯಲ್ಲಿ ಅವ್ಯವಹಾರದ ಲೆಕ್ಕಾಚಾರದ ಮೂಲಕ ಫಲಾನುಭವಿಗಳಿಗೆ ವಂಚನೆ. ►ಉದ್ದೇಶಪೂರ್ವಕ ಆಹಾರ ಕಲಬೆರಕೆಯ ಮೂಲಕ ಲಾಭಕೊರತನ ಮತ್ತು ಗುಣಮಟ್ಟದಲ್ಲಿ ಗಣನೀಯ ಮಾರ್ಪಾಟು ಆಗುವ ಮೂಲಕ ರಾಷ್ಟ್ರೀಯ ನಷ್ಟ. ►ಕೃತಕ ಬೆಲೆ ಏರಿಕೆಯನ್ನು ಪ್ರೇರೇಪಿಸುವ ಅಕ್ರಮ ಧಾನ್ಯ ದಾಸ್ತಾನು ಕ್ರಮ. ►ಗುಣಮಟ್ಟವನ್ನು ಕಾಯ್ದುಕೊಳ್ಳುವ ಪರಿಶೀಲನೆಯಲ್ಲಿ ಆಗುವ ಭೃಷ್ಟಾಚಾರವು ಫಲಾನುಭವಿಗಳಲ್ಲಿ ಪೌಷ್ಟಿಕತೆಯ ಕೊರತೆಯನ್ನುಂಟುಮಾಡಬಲ್ಲದು.
30.
ತೀರ್ಮಾನತೀರ್ಮಾನ ►ಸವಾಲುಗಳೆಷ್ಟೇ ಇದ್ದರೂ, ಆಹಾರ ಭದ್ರತೆಯು ಬಹಳ ಅನಿವಾರ್ಯ. ಹೀಗಾಗಿ ಸವಾಲುಗಳನ್ನು ಮೀರಬೇಕಾಗಿದೆ ಮತ್ತು ಅಭಿವೃದ್ಧಿ - ಸಾಧ್ಯತೆಗಳನ್ನು ಪರಿಗಣಿಸಬೇಕಾಗಿದೆ. ►ಸಂಗ್ರಹಯೊಗ್ಯ ಧಾನ್ಯಗಳ ಉತ್ಪಾದನೆಯಲ್ಲಿ ಹೆಚ್ಚಳ, ಯೋಗ್ಯ ವಿಧಾನಗಳ ಮೂಲಕ ಸಂಗ್ರಹಣೆ ಮತ್ತು ವಿತರಣೆ ಅಥವಾ ಮಾರಾಟ – ಕ್ರಮಗಳು ದೇಶದ ಆಹಾರ ಭದ್ರತೆಗೆ ಸಹಕಾರಿ ಮತ್ತು ವಾಸ್ತವಿಕ ಅಗತ್ಯತೆಗಳಾಗಿವೆ.
31.
ಉಪಸಂಹಾರ [ಸಮಾಪ್ತಿ ]ಉಪಸಂಹಾರ [ಸಮಾಪ್ತಿ ] ►ಆಹಾರ ಭದ್ರತೆಯೂ ಸೇರಿದಂತೆ, ದೇಶದ ಭದ್ರತೆಗೆ ನೀಡಬೇಕಾದ ಪ್ರಾಶಸ್ತ್ಯಕ್ಕೆ ಚ್ಯುತಿ ಬಾರದಂತೆ ನಡೆದುಕೊಂಡಲ್ಲಿ, ಭವಿಷ್ಯ ನಿರ್ಮಾಣಕ್ಕೆ ಮತ್ತು ಅಭಿವೃದ್ಧಿಗೆ ಅಡೆತಡೆಗಳಿಲ್ಲ. ►ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಸ್ಥಿರತೆ ಮತ್ತು ಯೊಗ್ಯ ಅಸ್ತಿತ್ವಕ್ಕೆ ಅವಕಾಶ ನೀಡಿದಂತೆ.
32.
ಧನ್ಯವಾದಗಳು►Reference : Agricultural bulletins. BBC News website for History Wikipedia for Libya crisis information Academy of Development Science (ADS) info papers. Text books of Science and Social Science ಧನ್ಯವಾದಗಳು Presentation By: Sri. Johnson Dcunha
Thank you for your comment.